ಕಡಲಾಳದಲಿ ಸಿಲುಕಿ ಮುಳುಗಿದ ಜೀವಕೆ
ಉಸಿರಾಗಿ ಬಂದೆ...
ಮರುಭೂಮಿಯಲಿ ಬಾಯಾರಿದ ತುಟಿಗೆ
ಮಳೆಹನಿ ನೀನಾದೆ...
ಬಿರುಗಾಳಿಗೆ ನಡುಗಿ ಆರುತಿದ್ದ ದೀಪದ ಬೆಳಕಿಗೆ
ಕಾಪಾಡುವ ಹಸ್ತವಾದೆ ...
ಹೂವಿನ ಎಸಳು ಎಸಳುಗಳಲ್ಲಿ ಆಡಗಿದ ಪರಿಮಳದಂತೆ
ಲೀನವಾದೆ ನೀ ನನ್ನಲ್ಲಿ ....
ಜೇನಿನ ಹನಿ ಹನಿಯಲ್ಲಿ ಬೆರೆತಿರುವ ಸಿಹಿಯಂತೆ
ಸವಿಯಾದೆ ನನ್ನ ಬಾಳಲ್ಲಿ ...
ಕಾರ್ಮೋಡದ ಅಂಚು ಅಂಚಲ್ಲಿ ಮಿನುಗುವ ಶಶಿಯಂತೆ
ಬೆಳಕಾದೆ ನನ್ನ ದಾರಿಯಲ್ಲಿ ....
ನಿನ್ನ ಹಿತವಾದ ನಗೆಯನ್ನು ನನ್ನ ಕೆನ್ನೆಯ ಗುಳಿಯಲ್ಲಿ ಬಚ್ಚಿಡುವೆನು
ಮರೆಯಾಗದಿರು ಎಂದು...
ನಿನ್ನ ಪ್ರೀತಿಯ ಸ್ಪರ್ಶವನ್ನು ನನ್ನ ನಾಡಿ ಮಿಡಿತದಲ್ಲಿ ಮುಚ್ಚಿಡುವೆನು
ತಪ್ಪಿಸದಿರು ಎಂದು...
ನಿನ್ನ ಬೆಚ್ಚನೆಯ ಸಾನಿಧ್ಯವನ್ನು ನನ್ನ ಹೃದಯ ಬಡಿತದಲ್ಲಿ ಕೂಡಿಟ್ಟುಕೊಂಡಿರುವೆನು
ದೂರವಾಗದಿರು ಎಂದು...... ಮರುಭೂಮಿಯಲಿ ಬಾಯಾರಿದ ತುಟಿಗೆ