Saturday, 5 October 2013

ಕೋರಿಕೆ

                                 ಕೋರಿಕೆ

 ನನ್ನ ಬಾಳಿನ ಹಗಲಲ್ಲಿ ದೀಪವಾಗಿ ಉರಿದವನು 
      ಕತ್ತಲಾದಾಗ ಆರಿ ಹೋದೆ ಏಕೆ?
ಸಮುದ್ರ ತೀರದಲಿ ನನ್ನ ಕೈ ಹಿಡಿದು ನಡೆದವನು 
      ನಡುಸಾಗರದಲ್ಲಿ ಕೈ ಬಿಟ್ಟೆ ಏಕೆ?
ಹೂವಿನ ದಾರಿಯಲಿ ನನ್ನ ಹೊತ್ತು ನಡೆದವನು 
    ಮುಳ್ಳು ಚುಚ್ಚಿದಾಗ ಬಿಟ್ಟು ಹೋದೆ ಏಕೆ?
ನನ್ನ ಸಂತಸದ ದಿನಗಳಲ್ಲಿ ಮುಗುಳುನಗೆಯಾದವನು 
    ಕಣ್ಣೇರು ಹರಿದಾಗ ತಡೆಯಲಿಲ್ಲ ಏಕೆ?

ಆರಿದ ದೀಪವ ಹತ್ತಿಸೆಂದು ಕೇಳಲ್ಲ ನಿನ್ನಲಿ .... 
       ಕೈ ಹಿಡಿದು ನನ್ನ ಕಾಪಾಡೆಂದು ಬೇಡಲ್ಲ ನಿನ್ನಲಿ.... 
 ಮುಳ್ಳು ತೆಗೆದು ನನ್ನ ಹೊತ್ತಿ ನಡೆಯನಲ್ಲ ನಿನ್ನಲಿ ...  
       ಕಣ್ಣೀರ ಒರಸಿ ನಗಿಸೆಂದು ಹೇಳಲ್ಲ ನಿನ್ನಲಿ.....

ಕಾರ್ಮೋಡದ ಕತ್ತಲೆಯಲಿ ನಡುಗುತಿರುವೆ ನಾ 
      ಮಿಂಚುಳ್ಳಿಯಾಗಿ ಬಂದರೆ ಸಾಕು...  
ನಡುನೀರಿನಲ್ಲಿ ಮುಳುಗಿ ಒದ್ದಾಡುತಿರುವೆ ನಾ 
      ತೆಪ್ಪವೊಂದ ಕಳಿಸಿದರೆ ಸಾಕು.... 
ಮುಳ್ಳಿ ಚುಚ್ಚಿದ ನೋವಲ್ಲಿ ನರಳುತಿರುವೆ ನಾ       
       ಕೈ ಹಿಡಿದು ನಡೆಸಿದರೆ ಸಾಕು....  
ದಿನರಾತ್ರಿ ಅತ್ತು ಬೇಸತ್ತು ಹೋಗಿರುವೆ ನಾ 
      ನಿನ್ನ ತೋಳ ಆಸರೆಯೊಂದು ಸಾಕು.... 

No comments:

Post a Comment